ಲವ್ಲಿನಾ ಬೊರ್ಗೊಹೈನ್ ರವರು ಭಾರತೀಯ ಮಹಿಳಾ ಬಾಕ್ಸಿಂಗ್ ಪಟು. ಅವರು 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ಬಾಕ್ಸಿಂಗ್ (ವೆಲ್ಟರ್‌ವೈಟ್) ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು, ಒಲಿಂಪಿಕ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಆಗಿದ್ದಾರೆ. == ಆರಂಭಿಕ ಜೀವನ == ಲವ್ಲಿನಾ ಬೊರ್ಗೊಹೈನ್ ರವರು 2 ಅಕ್ಟೋಬರ್ 1997 ರಂದು ಜನಿಸಿದರು ಮತ್ತು ಅಸ್ಸಾಂನ ಗೋಲಘಾಟ್ ಜಿಲ್ಲೆಯವರು. ಆಕೆಯ ಪೋಷಕರು ಟಿಕೆನ್ ಮತ್ತು ಮಾಮೋನಿ ಬೊರ್ಗೊಹೈನ್. == ಸಾಧನೆಗಳು == === 2020 ಟೋಕಿಯೊ ಒಲಿಂಪಿಕ್ಸ್ === ಅವರು ಟೋಕಿಯೊ ಒಲಿಂಪಿಕ್ಸ್ ಬಾಕ್ಸಿಂಗ್ (ವೆಲ್ಟರ್‌ವೈಟ್) ಪ್ರಾಥಮಿಕ ಸುತ್ತಿನಲ್ಲಿ ಜರ್ಮನ್ ಬಾಕ್ಸರ್ ನಡಿನ್ ಅಪೆಟ್ಜ್ ಅವರನ್ನು ಸೋಲಿಸಿದರು ಮತ್ತು 30 ಜುಲೈ 2021 ರಂದು ಅವರು ತೈವಾನ್‌ನ ಚೆನ್ ನಿಯೆನ್-ಚಿನ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಅವರು ವಿಶ್ವ ನಂ ೧ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೋತು ಕಂಚಿನ ಪದಕ ಗೆದ್ದರು. == ಉಲ್ಲೇಖಗಳು ==